ಸ್ವಾತಿಯಂತೆ ಸ್ವಚ್ಛವಾದ ಕಾಂತಿಯಿಂದನಿರ್ಜೀವದ ನಿಶೆಗೆ ಚೈತನ್ಯ ತುಂಬುತ
ಬೆಳಗುವ ಕಡೆ ಬೆಳಗಾಗಿಸುವಲಿ
ಪ್ರಶಾಂತತೆ ಪ್ರಸನ್ನವಾಯಿತು ನಿನ್ನಲಿ
ಅಜ್ಞಾನದ ಅವನತಿಗೆ
ವಿಜ್ಞಾನದ ಪ್ರಗತಿಗೆ
ಆಗಸದ ನೇಸರನಂತೆ
ಬೆಳಕಿನ ಬಿತ್ತನೆಗೈಯ್ಯುತ, ನೆರಳಿನ ಕೆತ್ತನೆ ಮಾಡುವೆ
ಉರಿಯುತಲಿದ್ದರೂ ಇಳೆಗೆ, ಬೆಳಕಿನ ಹೊಳೆ ಹರಿಸುವ ನಿನಗೆ
ನಮಿಸುವೆವು ನಿತ್ಯವೂ...