ಕರಗುತಿಹ ಸುತ್ತಲ ಸಂಜೆಯಲಿ,
ದೂರವ ಮರೆಸುತಿಹ ದಾರಿಯಲಿ,
ಮುನ್ನಡೆಸಿದ ಮನದ ಬಯಕೆ ಯಾವುದೊ,
ಮೈಮರೆಸಿದ ಮುಸ್ಸಂಜೆ ಎಂತದೊ....!!
ನೀರಲ್ಲಿ ನಡೆವ ಅಲೆಗಳ ಸೇರಿ,
ತೇಲುತ ತೂಗುತಿಹ ತೆಪ್ಪವನು ಏರಿ,
ನಿರಾಳವಾದ ನೀಲಿ ಗಗನದ ಕಡೆಗೆ,
ಪ್ರತಿ -ಕ್ಷಣ ಕದಲುವ ಕಡಲಿನ ಕೊನೆಗೆ ...!!
ಸಾಗುತಿಹ ಈ ಪಯಣ ನಿರಂತರ !
ತೀರದಿಂದ ತೀರಕೆ ಈ ಪಯಣ ನಿರಂತರ !
