ಒಳ್ಳೆಯದೇ ಆಯಿತು
ಮರದಡಿ ಮರುಗಿದ ಕಾಲ ವರುಷವೇ ಆಯಿತು ..!
ರಕ್ಕಸಿಯರ ನಡುವೆ
ಒಂಟಿ ಹೆಣ್ಣಿನ ಬಾಳ್ವೆ !
ಅಂಜಿ, ಅತ್ತು ಸೊರಗಿದ ಕಾಲ ವರುಷವೇ ಆಯಿತು ...
ಧರಣಿಯಲ್ಲವೇನು ಹೆತ್ತ ತಾಯಿ ?
ಕಂಬನಿ ಒರೆಸಲು ಮರೆಯಿತು ಅವಳ ಕೈಯ್ಯಿ
ಒಳ್ಳೆಯದೇ ಆಯಿತು! ಆ ದುರ್ಭರ ಕಾಲ ವರುಷವೇ ಆಯಿತು ...
ಗಿಡ-ಮರವಲ್ಲವೇನು ಒಡ-ಹುಟ್ಟಿದವರು ?
ಚೂರು ನೆರಳು ಬಿಟ್ಟು ಮತ್ತೇನು ಕೊಟ್ಟರು ...
ಒಳ್ಳೆಯದೇ ಆಯಿತು! ಆ ಕೆಟ್ಟ ಕಾಲ ವರುಷವೇ ಆಯಿತು ...
ಹೆತ್ತ ತಾಯಿಯ ಮಡಿಲಲಿ
ಒಡ-ಹುಟ್ಟಿದವರ ನಡುವಿನಲಿ
ನೊಂದು ಕೊರಗಿದ ಕಾಲ ಮತ್ತಾರಿಗೂ ಬಾರದಿರಲಿ ...
ಸಹಿಸಿದಳು ಹೇಗೋ ಸೀತೆ ! ಶೋಕ ವನಿತೆ !
