ಮೂಡಲ ಮನೆಯ ಒಡೆಯ
ರಥವೇರಿ ಬಂದಾಗ
ರಜನಿಯು ಕಾಣದೆ ಕಣ್ಮರೆಯಾದಾಗ
ಹರಿದ ಬೆಳಕು, ಯಾರಿಗೂ ಕೆಡಕಲ್ಲವೊ ಗೆಳೆಯ
ಪ್ರತಿ ದಿನವೂ ಶುಭ ದಿನವೇ... ನೀ ತಿಳಿಯ .... !!
ಗ್ರಹಗಳ ಗತಿಯನು, ಸಮಯದ ಸ್ಥಿತಿಯನು ಮರೆಯ
ಬೆವರುವಂತೆ ದಣಿದಾಗ
ಮೋಸವನು ಮರೆತು ನಡೆದಾಗ!!
ಹುಡುಕಿ ಬರುವುದೊ ನಿನ್ನ ಫಲವು ತಿಳಿಯ
"ಸಕಲ ಗ್ರಹಬಲ ನೀನೇ ಸರಸಿಜಾಕ್ಷ... " ಎಂದು ಮುನ್ನೆಡೆಯ ...
.
