Idu-NannaKavana
ನನ್ನ ಮನದ ಕದ ತಟ್ಟಿದ ಭಾವನೆಗಳ ಭವನ - ನನ್ನ ಕವನ
Tuesday, December 7, 2010
ಪ್ರೀತಿ
ಜೀವ
ಜೀವದ
ನಡುವಿನ
ಜೀವಜಾಲವಿದು
ಪ್ರೀತಿ
...
ಒಬ್ಬರನು
ಮತ್ತೊಬ್ಬರು
ಬಿಟ್ಟಿರಲಾರದ
ರೀತಿ
...
ಒಂಟಿಯಾಗಿ
ಬದುಕಬೇಡೆಂಬ
ದೇವರ
ಜಾಣತನದ
ನೀತಿ
...
ದೂರವಾಗಿ
ಉಳಿದ
ಮನಸಿನ
ಪರಿಸ್ಥಿತಿ
...
ಹೃದಯವು
ಮೆಚ್ಚಿ
ಕೊನೆವರೆಗೂ
ಬಚ್ಚಿಡುವ
ಬುತ್ತಿ
...
ಪ್ರೀತಿ
...
Monday, November 15, 2010
ಮಳೆಯಲಿ ನೆಂದೆ ನಾನು
ಮಳೆ
-
ಹನಿಗಳು
ನಗುತ
ತಂಪನು
ಬೀರುತಿರಲು
ಬಿಸಿಯೆಲ್ಲಾ
ಮೌನವಾಗಿ
ಬೀಸುವ
ಗಾಳಿ
ತಂಪಾಗುತಿರಲು
ಬೆವರಿನ
ಹನಿ
ಮರೆಯಾಗುವಂತೆ
ಮಳೆಯ
ಪ್ರತಿ
-
ಹನಿಯಲ್ಲೂ
ನೆನೆಯುತ
ಮನಸಿನ
ನಗೆಯನು
ಸವಿಯುತ
ಜಾರಿ
-
ಬಿದ್ದ
ಹೂಗಳ
ಮೇಲೆ
ಹೆಜ್ಜೆ
ಹಾಕುತ
ಹೊರಟೆ
Wednesday, October 27, 2010
ನಿನ್ನ ಕಣ್ಣೋಟ
ನಿನ್ನ
ನೋಟದ
ಸ್ಪರ್ಶವು
ನನ್ನ
ಮನಸಿಗೆ
ತಗುಲಿದ
ಕ್ಷಣವು
ಏನೋ
ಹೇಳುತಿದೆ
ಹೃದಯವು
...
ಅಪ್ಪಳಿಸಿದ
ಅಲೆಗಳ
ತಂಪು
ಹೂವಿನ
ಕುಡಿಗಳ
ಕಂಪು
ಅರಿವಾಗುತಿದೆ
ಮನಸಿಗೆ
ಮೆಲ್ಲಗೆ
...
ಮತ್ತೇನೋ
ಅಡಗಿದೆ
ನಿನ್ನ
ಕಣ್ಣಲಿ
ನಾನರಿಯದ
ನೂರು
ಮಾತುಗಳು
ಅಲ್ಲಿ
ಬಿಡಿಸಿ
ಹೇಳಲು
ಸೋತೆ
ಈ
ಕವನದಲ್ಲಿ
...
Tuesday, October 12, 2010
ಮಳೆರಾಯ
ರವಿ ಮೂಡದ
ಬಾನಿನಲಿ
ಮಿಂಚಿನ ದೀಪವ
ಹಿಡಿದು,
ದಿಕ್ಕುಗಳ ಕದವನು
ಬಡಿದು,
ಧರೆಯನು ಹುಡುಕಿ ಬರುತಿದ್ದಾನೆ
ಮಳೆರಾಯನು
...
ಬಾನಾಡಿನಲಿ
ಗುಡುಗಿ,
ಕರಿ-ಮೋಡಗಳನು
ಕೂಗಿ,
ಧರೆಯನು
ಕಾಣಲು
ಬರುತಿದ್ದಾನೆ
ಮಳೆರಾಯನು
...
ಅಗಸವನ್ನೇ
ದಾಟುತ,
ಸಾಗರವನ್ನೇ
ಸುರಿಯುತ,
ಧರೆಯನು ಸೇರಲು ಬರುತಿದ್ದಾನೆ
ಮಳೆರಾಯನು...
Monday, September 6, 2010
ಜ್ಯೋತಿ
ಸ್ವಾತಿಯಂತೆ
ಸ್ವಚ್ಛವಾದ
ಕಾಂತಿಯಿಂದ
ನಿರ್ಜೀವದ
ನಿಶೆಗೆ
ಚೈತನ್ಯ
ತುಂಬುತ
ಬೆಳಗುವ
ಕಡೆ
ಬೆಳಗಾಗಿಸುವಲಿ
ಪ್ರಶಾಂತತೆ
ಪ್ರಸನ್ನವಾಯಿತು
ನಿನ್ನಲಿ
ಅಜ್ಞಾನದ
ಅವನತಿಗೆ
ವಿಜ್ಞಾನದ
ಪ್ರಗತಿಗೆ
ಆಗಸದ
ನೇಸರನಂತೆ
ಬೆಳಕಿನ
ಬಿತ್ತನೆಗೈಯ್ಯುತ
,
ನೆರಳಿನ
ಕೆತ್ತನೆ
ಮಾಡುವೆ
ಉರಿಯುತಲಿದ್ದರೂ
ಇಳೆಗೆ
,
ಬೆಳಕಿನ
ಹೊಳೆ
ಹರಿಸುವ
ನಿನಗೆ
ನಮಿಸುವೆವು
ನಿತ್ಯವೂ
...
Newer Posts
Home
Subscribe to:
Comments (Atom)