ಮುದ್ದು ಮೀನಿನ ಅಕ್ಕರೆಯ ಮುತ್ತನ್ನು ,
ಮರೆಯಲಿ ಹೇಗೆ ?
ಸುತ್ತಲಿರುವ ಮೆತ್ತನೆಯ ಅಲೆಗಳನ್ನು ,
ಮತ್ತೊಮ್ಮೆ ಕರೆಯಲಿ ಹೇಗೆ ?
ಮಡಿಲನು ಸೇರಿದ ಮುತ್ತಿನ ಹನಿಗಳು,
ಉಳಿಯಲಿ ಹಾಗೆ ....
ನೀರಲ್ಲಿ ನೆನೆದ ನನ್ನೆರಡು ತುಟಿಗಳು,
ಎಂದೂ ಮಿನುಗಲಿ ಹಾಗೆ....
ಬಿರಿದ ನನ್ನ ತನುವು,
ಕಂಪಿನಲಿ ಬೆರೆತ ನನ್ನ ಮನವು,
ಜೊತೆಯಾಗಿ ಹಾಡುತಿದೆ ಹಂಸಗೀತೆ,
ಕಣ್ಣೆರಡು ನುಡಿಯುತಿದೆ ನೆಚ್ಚಿನ ಕವಿತೆ !!!
