
ನೀಲಿ ಬಾನಿನಲಿ ನಡೆದು ಹೋಗುವ ಮೋಡಗಳೆ
ತಂಗಾಳಿಯಲಿ ತೇಲಿ ಹೋಗುವ ಮೋಡಗಳೆ
ನಿಮ್ಮ ಪಯಣದಲಿ ನಿಮ್ಮ ಜೊತೆಯಿರುವವರಾರು?
ನಡು ರಾತ್ರಿಯ ನಿಶ್ಶಬ್ದ ನಾಡಿನಲಿ
ತಾರೆಗಳ ಅಂಗಳದಂತಿರುವ ಬಾನಿನಲಿ
ನಿಮ್ಮೊಂದಿಗೆ ಪಿಸುಮಾತಾಡುವ ಗೆಳೆಯರಾರು?
ಚಂದಿರನ ಸನಿಹದಲಿ ಸುಳಿದರೂ
ಕವಿಗಳ ಮನ ಸೆಳೆದರೂ
ನನ್ನ ಹೊರತು ನಿಮ್ಮನು ಬಣ್ಣಿಸಿದವರಾರು?