Wednesday, October 27, 2010

ನಿನ್ನ ಕಣ್ಣೋಟ

ನಿನ್ನ ನೋಟದ ಸ್ಪರ್ಶವು
ನನ್ನ ಮನಸಿಗೆ ತಗುಲಿದ ಕ್ಷಣವು
ಏನೋ ಹೇಳುತಿದೆ ಹೃದಯವು ...

ಅಪ್ಪಳಿಸಿದ ಅಲೆಗಳ ತಂಪು
ಹೂವಿನ ಕುಡಿಗಳ ಕಂಪು
ಅರಿವಾಗುತಿದೆ ಮನಸಿಗೆ ಮೆಲ್ಲಗೆ...

ಮತ್ತೇನೋ ಅಡಗಿದೆ ನಿನ್ನ ಕಣ್ಣಲಿ
ನಾನರಿಯದ ನೂರು ಮಾತುಗಳು ಅಲ್ಲಿ
ಬಿಡಿಸಿ ಹೇಳಲು ಸೋತೆ ಕವನದಲ್ಲಿ ...

Tuesday, October 12, 2010

ಮಳೆರಾಯ


ರವಿ ಮೂಡದ
ಬಾನಿನಲಿ

ಮಿಂಚಿನ ದೀಪವ ಹಿಡಿದು,
ದಿಕ್ಕುಗಳ ಕದವನು
ಬಡಿದು,
ಧರೆಯನು ಹುಡುಕಿ ಬರುತಿದ್ದಾನೆ ಮಳೆರಾಯನು...

ಬಾನಾಡಿನಲಿ ಗುಡುಗಿ,
ಕರಿ-ಮೋಡಗಳನು ಕೂಗಿ,
ಧರೆಯನು ಕಾಣಲು ಬರುತಿದ್ದಾನೆ ಮಳೆರಾಯನು...

ಅಗಸವನ್ನೇ ದಾಟುತ,
ಸಾಗರವನ್ನೇ ಸುರಿಯುತ,
ಧರೆಯನು ಸೇರಲು ಬರುತಿದ್ದಾನೆ ಮಳೆರಾಯನು...