ನಂಬಬಹುದೇ ನಿನ್ನ ನಗುವನು ? ತಿಳಿಯಬಹುದೇ ನನ್ನವಳೆಂದು ನಿನ್ನನು ? ಉಳಿಸಿಕೊಳ್ಳಬಹುದೇ ನಿನ್ನ ನೆನಪನ್ನು ? ಮರಳಿ ಮತ್ತೊಮ್ಮೆ ಕೇಳಬಹುದೇ ನಿನ್ನ ದನಿಯನ್ನು ? ಇರಲಿ ಒಪ್ಪಿಗೆಯೆಲ್ಲಿದೆ ? ಒಪ್ಪಂದವೆಲ್ಲಿದೆ ? ಹೃದಯದ ಭಾಷೆಗೆ ! ಪುಸ್ತಕದ ಮೊದಲ ಸಾಲು ಪರಿಚಯದ ಮೊದಲ ಕ್ಷಣಗಳು ಎಂದಿಗೂ ಸವಿ ಸವಿ ಹನಿಗಳು
ಆಯಿತು ಎಂದೋ ಸುಟ್ಟು ಬೂದಿಯಾಯಿತು ಲಂಕಾರೂಪ ಇನ್ನೂ ನೀಗಲಿಲ್ಲವೇ ನಿನ್ನ ಕೋಪ ? ಬಿದ್ದ ಎಂದೋ ಉರುಳಿ ಬಿದ್ದ ಹತ್ತು ತಲೆಯ ಹೊತ್ತ ರಾವಣ ಭೂಪ ಇನ್ನೂ ನೀಗಲಿಲ್ಲವೇ ನಿನ್ನ ಕೋಪ ? ನೆಚ್ಚಿಹರು ಬಹಳ ಮೆಚ್ಚಿಹರು ನಿನ್ನ ಕನ್ನಡಿಗರು ಎಲ್ಲೆಲ್ಲೂ ನಿನ್ನನ್ನೇ ಅಚ್ಚಿಹರು, ನೆನೆದಿಹರು ತಣ್ಣಗಾಗಲಿ ಇನ್ನಾದರೂ ನಿನ್ನ ಕೋಪ ಭಜರಂಗಿ !