ನರಗಳು ಬಲಿತ
ನಿನ್ನ ಕೈಯ್ಯಿಂದ,
ನೀ ಕೊಡುವ
ಪೆಟ್ಟಿನಿಂದ,
ನನ್ನ ಎಳೆ-ಮೈಯ್ಯಿ
ಕೆಂಪಾಗುತಿದೆ, ನಡುಗುತಿದೆ ಹೆದರಿಕೆಯಿಂದ
ಅಮ್ಮ! ನನ್ನ
ಹೊಡೆಯಬೇಡ ನೀನು...
ಕಣ್ಣೀರು ಸುರಿಸಿ,
ಅಳುತಿರುವೆ ಏರು-ದನಿಯಿಂದ,
ನಿನ್ನ ಹೊರತು,
ಬೇರೆಲ್ಲರೂ ಕಾಣುತಿಹರು ನನ್ನ ಕರುಣೆಯಿಂದ,
ಮರೆತೆಯಾ? ನಾನು
ನಿನ್ನ ಕಂದ
ಅಮ್ಮ! ನನ್ನ ಹೊಡೆಯಬೇಡ ನೀನು...
ಮುರಿದ
ಗೊಂಬೆಯಾದರೂ ಸಾಕು ನನಗೆ
ಮೌನವಾಗುವೆ
ಜಾಣತನದ ಮಾತಿಗೆ
ಹಾಲು, ಲಾಲಿ-ಹಾಡು
ಮಾತ್ರ ಸಾಕು ನನಗೆ
ಅಮ್ಮ! ನನ್ನ
ಹೊಡೆಯಬೇಡ ನೀನು...
ಸಹಿಸಲಾರೆನು ಈ
ನೋವನ್ನು...
