ಸಿಡಿಲೆದೆಯ ಬಡಿತ,ಗುಡುಗಿನಂತೆ ಗರ್ಜಿಸುತ...
ಹೆಬ್ಬುಲಿಯಂತೆ ಹುಬ್ಬೇರಿಸುತ,
ಕೆರಳಿ ಕಣ್ಣನು ಕೆಂಪಾಗಿಸುತ...
ನರನಾಡಿಯಲಿ ಪೌರುಷವನು ಎಬ್ಬಿಸುತ ,
ಎದುರಾಳಿಯ ಎದೆಯನು ಸೀಳುತ ...
ಕೋಪದಿಂದ ಕಿಡಿ ಕಾರುತ,
ಕೆರಳಿದ ಕೇಸರಿಯಂತೆ ಬೇಟೆಯಾಡುತ,
ಸಾವನ್ನೇ ಅಪ್ಪಿಕೊಳ್ಳುತ,
ಯುದ್ಧ ಭೂಮಿಯನೇ ಅಂಜಿಸುತ...!!!
ಒಬ್ಬರಿಗೆ ಮತ್ತೊಬ್ಬರು ಜೊತೆಯಾಗಿ ಕೂಗಿದರು,
ಮೂರು ನೂರು ಕ್ರಾಂತಿ ವೀರರು ...