Thursday, July 14, 2011

300

ಸಿಡಿಲೆದೆಯ ಬಡಿತ,
ಗುಡುಗಿನಂತೆ ಗರ್ಜಿಸುತ...

ಹೆಬ್ಬುಲಿಯಂತೆ ಹುಬ್ಬೇರಿಸುತ,
ಕೆರಳಿ ಕಣ್ಣನು ಕೆಂಪಾಗಿಸುತ...

ನರನಾಡಿಯಲಿ ಪೌರುಷವನು ಎಬ್ಬಿಸುತ ,
ಎದುರಾಳಿಯ ಎದೆಯನು ಸೀಳುತ ...

ಕೋಪದಿಂದ ಕಿಡಿ ಕಾರುತ,
ಕೆರಳಿದ ಕೇಸರಿಯಂತೆ ಬೇಟೆಯಾಡುತ,

ಸಾವನ್ನೇ ಅಪ್ಪಿಕೊಳ್ಳುತ
,
ಯುದ್ಧ ಭೂಮಿಯನೇ ಅಂಜಿಸುತ...!!!

ಒಬ್ಬರಿಗೆ ಮತ್ತೊಬ್ಬರು ಜೊತೆಯಾಗಿ ಕೂಗಿದರು,
ಮೂರು ನೂರು ಕ್ರಾಂತಿ ವೀರರು ...

4 comments:

  1. ತುಂಬಾ ಧನ್ಯವಾದಗಳು ...

    ReplyDelete
  2. ಕವನ ಚೆನ್ನಾಗಿ ಮೂಡಿಬ೦ದಿದೆ. ಕವನ ಒದುತ್ತಾ ಆ ಯುದ್ದದ ಸನ್ನಿವೇಶಗಳು ಕಣ್ಣೀಗೆ ಕಟ್ಟಿತು.

    ReplyDelete