Sunday, January 1, 2012

ಶುಭಾಷಯ!


ಮಾಮರವು ಚಿಗುರೊಡೆದು,
ಕಂಪನು ಬೀಸಲಿ ...

ನೀಲಾಂಬರದಿಂದ ಶಶಿಯು,
ತಂಪನು ಸುರಿಸಲಿ...
ನನ್ನವರಿಗಾಗಿ ಹೊಸ-ವರುಷದಲಿ !

ಶುಭವ ಕೋರಿ ನಭದಿಂದ,
ಪ್ರಭಾಪಾತವು ಹರಿಯಲಿ ...

ಹೊಸ ಬೆಳಕು ಮೂಡಣದಿಂದ,
ಹರುಷವನು ಹೊತ್ತು-ತರಲಿ ...
ನನ್ನವರಿಗಾಗಿ ಹೊಸ-ವರುಷದಲಿ !

ನೂರು ನಗೆಯಲಿ ಮುಖವು ಅರಳಲಿ !
ನೂರೆಂಟು ಬಗೆಯಲಿ ಸುಖವು ಸೇರಲಿ !
ನಿಮಗಿದೋ ಆಶಯ, ನನ್ನ ಶುಭಾಷಯ...

4 comments:

  1. Very Nice Ashok. Keep posting such poems more and more. Have a very happy new year ahead

    ReplyDelete
  2. This comment has been removed by the author.

    ReplyDelete
  3. ನಿಮ್ಮ ಕವನದ ಮತೊಬ್ಬ ಹಿಂಬಾಲಕ...
    ನಿಮಗೂ ಸಹ ಶುಭಾಶಯಗಳು..
    ಸಿಹಿ ಸಂವತ್ಸರ :-)

    ReplyDelete