ಸತಿ ಚಂದ್ರಮತಿ, ಸುತ ಲೋಹಿತ
ನಿಜವನು ನುಡಿವುದೇ ವ್ರತ!
ಸಕಲವೂ ಕಳೆದ ಕೌಶಿಕನ ಕಾಟದಲ್ಲಿ !
ರಾಶಿ ಹಣಕ್ಕಾಗಿ ಕಾಶಿಯಲ್ಲಿ,
ಮಡದಿ, ಮಗನನು ಮಾರಿದ ಪುರ ಮಧ್ಯದಲ್ಲಿ ...
ಆದರೇನು, ಹುಸಿ ನುಡಿವನೇ ಹರಿಶ್ಚಂದ್ರ !!!
ತೀರದೇ ಋಣ,
ಹೆಣಗಳ ಕಾಯಲು ಸೇರಿದ ಮಸಣ!!
ಸರ್ಪವು ಕಳೆಯಿತು ಪ್ರಿಯಸುತನ ಪ್ರಾಣ...
ಆದರೇನು, ಹುಸಿ ನುಡಿವನೇ ಹರಿಶ್ಚಂದ್ರ !!!
ಕರಾಳ ರೂಪ ತಾಳಿದ , ಕಾಲನು
ಮಗನ ಸುಡಲು ಹಣವ ಕೇಳಿದ ಮಡದಿಯನು!
ಚೋರಿಯೆಂದು, ಕಡಿಯಲು ಹೇಳಿದರು ಚಂದ್ರಮತಿಯನು!!!
ಆದರೇನು, ಹುಸಿ ನುಡಿವನೇ ಹರಿಶ್ಚಂದ್ರ !!!

aadru moothy,annavra poto haakbekittu nodappa neenu
ReplyDeletenext time definete agi haktini ...
ReplyDeleteNice one dude....
ReplyDelete