ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಮೂಷಿಕನೇ ಮೂಲಂ,
ನಿನ್ನೀ ಜನನಕೆ ಕಾರಣಂ!
ಬಾಗಿಲು ಕಾದು,
ಈಶ್ವರಿಗೆ ಸಲ್ಲಿಸಿದೆ ಗೌರವಂ
ಹರನ ಪ್ರವೇಶಕ್ಕೂ ನೀ ಮಾಡಿದೆ ತಿರಸ್ಕಾರಂ !
ತಿರಸ್ಕಾರಂ
ಹರನ ಕೋಪಾಗ್ನಿಗೆ ಕಾರಣಂ
ತ್ರಿಶೂಲಂ, ತ್ರಿನೇತ್ರಂ ಮಾಡಿದವು ಶಿರಚ್ಛೇದನಂ!
ಹರಿಯಿತು ಅಲ್ಲಿ
ಶಾಂಭವಿಯ ಕಣ್ಣೀರ ಸಮುದ್ರಂ!
ಸಾಂತ್ವನಕೆ ಸಕಲ ದೇವಗಣಂ ಅಲ್ಲಿ ಪ್ರತ್ಯಕ್ಷಂ
ಕಾಡಿನೊಳು
ಉತ್ತರಕೆ ಮಲಗಿದ್ದ ಗಜ ಒಂದರ ರುಂಡಂ
ನಿನಗೆ ಸೇರಿಸಿ ಹಾಡಿದರು ನಮೋ ವಿನಾಯಕಂ ...
ಅಂದಿನಿಂದ ಮೊದಲು
ಪೂಜೆಗೆ ಮೊದಲು ಅಗಜಾನನ ಪದ್ಮಾರ್ಕಂ
ಭಾದ್ರಪದ ಚವಿತಿಯಂದು ಗಣೇಶ ಚತುರ್ಥಿ ಆಚರಣಂ!
ನಿನಗಿಷ್ಟವೆಂದು ಎಲ್ಲರ ಮನೆಯಲ್ಲೂ ಕಡುಬೇ ಪ್ರಸಾದಂ!!!!

No comments:
Post a Comment