ಮುಸ್ಸಂಜೆ ಮಳೆಯಲ್ಲಿ
ಉಕ್ಕಿ ಹರಿದ ಹೊಳೆಯಲ್ಲಿ
ತೇಲಿಬಿಟ್ಟ ಹಡಗು......... ನೆಂದು ಉರುಳಿದ ನೆನಪು ...
ತುಂಬು ಕೆರೆಯ ಪಕ್ಕದಲ್ಲಿ
ಮುದ್ದು ಮಾತನು ಕೇಳುತಲಿ
ಕೈಬೆರಳು ಹಿಡಿದು .......... ನಡೆದು ಹೋದ ನೆನಪು ....
ಬೆಟ್ಟದಡಿಯ ಬಯಲಲ್ಲಿ
ಬಣ್ಣ ಬಣ್ಣದ ಬಗೆಯಲ್ಲಿ
ಮುಗಿಲ ಮನೆಯತ್ತ ......... ಪಟವನು ಹಾರಿಸಿದ ನೆನಪು ....
ಅದಾವುದೋ ಕಥೆಯಲ್ಲಿ
ಅದಾರೊ ಸೋತ ಖುಷಿಯಲ್ಲಿ
ಮನಸಾರೆ ಜೊತೆ ಜೊತೆಯಾಗಿ ....... ಚಪ್ಪಾಳೆ ತಟ್ಟಿದ ನೆನಪು ....
ಅದೇ ನೆನಪು ...
ಮುಚ್ಚು ಮರೆಯಿಲ್ಲದೆ ನಕ್ಕು ನೆಗೆದ ನೆನಪು ...
ಹಗುರ ಮನಸಿನ ತುಂಬಾ ಅದೇ ನೆನಪು !!
ಮರಳಿಬಾರದೇಕೊ ಆ ಕ್ಷಣಗಳು ...!

No comments:
Post a Comment